ಐಕ್ಯತೆಯ ರಹಸ್ಯ!
"ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು." (ಜ್ಞಾನೋಕ್ತಿಗಳು 15:1) ಗಂಡ ಹೆಂಡತಿ ಕುಟುಂಬದಲ್ಲಿ ಇಬ್ಬರು ಒಬ್ಬರಿಗೊಬ್ಬರು ಪರಸ್ಪರವಾಗಿ ಮನ ಬಿಚ್ಚಿ ಮುಚ್ಚುಮರೆಯಿಲ್ಲದೆ ಮಾತುಗಳು ಆಡುವುದು ಮುಖ್ಯವಾಗಿರಬೇಕು.
ಇಂದು ಅನೇಕ ಕುಟುಂಬಗಳಲ್ಲಿ ಪರಸ್ಪರ ಒಂದಾಣಿಕೆಯ ಕೊರತೆಗೆ ಕಾರಣ ಒಬ್ಬರನೊಬ್ಬರು ಮನಸ್ಸು ಬಿಚ್ಚಿ ಮಾತನಾಡೋದೇ ಇರೋದಕ್ಕೆ ಕಾರಣವೇ.
ದೇವರ ಮಕ್ಕಳೇ, ನಿಮ್ಮ ಕುಟುಂಬದೊಂದಿಗೆ ಮಾತನಾಡುತ್ತೀದ್ದಿರಾ? ನಿಮ್ಮ ಸಂಗಾತಿಯೊಂದಿಗೆ ವಿಶೇಷವಾಗಿ ಮಾತನಾಡಲು ನೀವು ಸಮಯ ತೆಗೆದುಕೊಳ್ಳುತ್ತೀದ್ದಿರಾ? ನೀವು ಹಾಗೆ ಮಾತನಾಡುವಾಗ, ನಿಮ್ಮ ಮಾತುಗಳು ಕುಟುಂಬಕ್ಕೆ ಶಾಂತಿ ಮತ್ತು ಸಂತೋಷವನ್ನು ತರುತ್ತವೆ.
ನಿಮ್ಮ ಹೃದಯವು ಕೋಪಗೊಂಡಿದ್ದರೆ ಅಥವಾ ಕಿರಿಕಿರಿಯುಂಟುಮಾಡಿದರೆ, ಶಾಂತವಾಗಿರಿ. ಸಾವಧಾನತೆಯನ್ನು ಅಭ್ಯಾಸ ಮಾಡಿ. ವಾಕ್ಯ ಹೇಳುತ್ತದೆ,
"ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ; ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ." (ಜ್ಞಾನೋಕ್ತಿಗಳು 16:32). ದೀರ್ಘಶಾಂತಿಯು ಪವಿತ್ರಾತ್ಮನ ಫಲಗಳಲ್ಲಿ ಒಂದು. (ಗಲಾತ್ಯ 5:23).
ಕುಟುಂಬ ಸಂಬಂಧಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ, ಸತ್ಯತೆಯನ್ನು ಅರಿತು ಒಬ್ಬರೊಬ್ಬರ ವಿಷಯವನ್ನು ಕುರಿತು ಆಲೋಚನೆ ನೀಡಬೇಕು, ಯೋಚನೆ ಮಾಡದೆ ದೀಢಿರ್ ಊಹಾ ಪೋಹಾಗಳೆ ನಿಜವೆಂದು ನಿರ್ಧರಿಸಬಾರದು. "ಜ್ಞಾನಿಗಳ ತುಟಿಗಳು ತಿಳುವಳಿಕೆಯನ್ನು ಬಿತ್ತುವವು. ಜ್ಞಾನಹೀನರ ಹೃದಯವು ಅದನ್ನು ಬಿತ್ತುವದೇ ಇಲ್ಲ." (ಜ್ಞಾನೋಕ್ತಿಗಳು 15:7). ತಿಳುವಳಿಕೆಯ ಜ್ಞಾನ ಹೊಂದಬೇಕಾದದ್ದನ್ನು ದೇವರು ನಿಮಗೆ ವರದಾನವಾಗಿ ಕೊಟ್ಟಿದ್ದಾನೆ. (1 ಕೊರಿಂಥ 12:8). ಒಬ್ಬ ವ್ಯಕ್ತಿಯ ಸ್ಪಷ್ಟ ಜ್ಞಾನ ಮತ್ತು ಸಂದರ್ಭಗಳಲ್ಲಿ ತಿಳುವಳಿಕೆ ಮತ್ತು ಐಕ್ಯತೆಗೆ ಬಹಳ ಪ್ರಯೋಜನಕಾರಿಯಾಗಿದೆ.
ಒಮ್ಮೆ ಒಬ್ಬನೇ ದೇವಾ ಸೇವಕರು ಹಿಂದುಗಳೊಡನೆ ಮುಸಲ್ಮಾನರೋಡನೆ ಒಂದು ಕೂಟವನ್ನು ಏರ್ಪಡಿಸಿದರು. ಆ ಕೂಟದ ಬಗ್ಗೆ ಒಂದು ಪತ್ರಿಕೆಯು ಎರಡು ಧರ್ಮವನ್ನು ಕುರಿತು ಕೂಟದ ಆಯೋಜನೆ ಮಾಡಿದ ಬಗ್ಗೆ ಪ್ರಕಟಿಸಿತ್ತು. ಮತ್ತೊಂದು ಪತ್ರಿಕೆಯಲ್ಲಿ ಕೇವಲವಾಗಿ ಪತ್ರಿಕೆಯಲ್ಲಿ ಪ್ರಕಟಿಸಿತು ತದನಂತರ ಅದು ಸುಳ್ಳುಸುದ್ದಿ ಎಂದು ತಿಳಿಯಲ್ಪಟ್ಟಿತು. ಅವರ ಹೆಸರು ಕೆಡಿಸಿತ್ತು, ಮಾತ್ರವಲ್ಲದೆ ಯಾವ ವಿಷಯ ಸರಿಯಾಗಿ ತಿಳಿದುಕೊಳ್ಳದೆ ಮುದ್ರಿಸೋದು ಬರೀ ಉಹಾ ಪೋಹಾ ವಾಗಿತ್ತು. ಇನ್ನೊಬ್ಬರ ಮೇಲೆ ಹೇಳುವ ವಿಷಯಗಳು ವಿಚಾರಿಸುವಾಗ ನೀವು ಹೋಗಿ ಸತ್ಯವನ್ನು ಮರೆ ಮಾಡಿದರೆ, ಕಹಿ ಭಾವನೆಗಳನ್ನು ಮತ್ತು ಹಗೆತನವನ್ನು ಇರಿಸಲು ಸಾಧ್ಯವಿಲ್ಲ.
ನೆನಪಿಡಿ:- "ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.' (ಜ್ಞಾನೋಕ್ತಿಗಳು 16:7).