2020 ಜೂನ್ ತಿಂಗಳ 26ನೇ ತಾರೀಕು ಶುಕ್ರವಾರದ ಈ ದಿನದ ವಾಕ್ಯಗಳು.
' ದುರ್ಬಲರಾಗಿ ಅವರ ಜನಾಂಗದವರಲ್ಲಿ ಒಬ್ಬರು ದುರ್ಬಲರಾಗಿರಲಿಲ್ಲ' ಕೀರ್ತನೆ 105:37
ಇಸ್ರಾಯೇಲ್ ಜನರು ಐಗುಪ್ತ ದೇಶದಲ್ಲಿ ಬಂಧನದಲ್ಲಿ ಇದ್ದರು ಕಠಿಣವಾದ ಹೋರಾಟ ಪರಿಶ್ರಮ ಭಯಂಕರವಾದ ಸಂಕಟಗಳಿಂದ ಸಿಕ್ಕಿಕೊಂಡಿದ್ದ ಆ ಜನರ ಗೋಳಾಟವನ್ನು ಕರ್ತನು ನೋಡಿ ಅವರನ್ನು ಐಗುಪ್ತರಿಂದ ಬಿಟ್ಟಿ ಕೆಲಸದಿಂದ ಬಿಡುಗಡೆ ಮಾಡಿ ಕಾನಾನ್ ದೇಶಕ್ಕೆ ಕರೆದೊಯ್ದನು. ಅವರಲ್ಲಿ ಒಬ್ಬರು ದುರ್ಬಲರಾಗಿರಲಿಲ್ಲ ಎಂದು ಸತ್ಯವೇದವು ಹೇಳುತ್ತದೆ. ನೀವು ಬಲಶಾಲಿಗಳಾಗಿರಬೇಕೆಂದು ಕರ್ತನು ಬಯಸುತ್ತಾನೆ. ನೀವು ಯಾವುದೇ ದುರ್ಬಲರಾಗಿರುವುದು ಕರ್ತನ ಚಿತ್ತವಲ್ಲ, ಆ ದಿನದಲ್ಲಿ ಇಸ್ರೇಲ್ ಜನರನ್ನು ಬಲವಂತವಾಗಿ ಕಾದುಕೊಂಡನು ಈ ದಿನದಲ್ಲಿ ನಿಮ್ಮನ್ನು ಕೂಡಾ ಬಲಶಾಲಿಯನ್ನಾಗಿ ಸ್ಥಿರವಾಗಿ ಕಾದುಕೊಳ್ಳಲು ಕರ್ತನು ಪರಾಕ್ರಮಶಾಲಿಯಾಗಿದ್ದಾನೆ.
ಪ್ರಿಯನೇ, ನೀನು ಆತ್ಮ ವಿಷಯದಲ್ಲಿ ಅಭಿವೃದ್ಧಿಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ ಸುಕ್ಷೇಮವಾಗಿರಬೇಕೆಂದು ಕರ್ತನ ಬಯಕೆ ಮತ್ತು ಆತನ ಇಷ್ಟವು ಕೂಡಾ.
ನೀವು ಕರ್ತನ ಕಡೆಗೆ ನೋಡಿ ಆತನು ಎಷ್ಟೊಂದು ಶಕ್ತಿಶಾಲಿಯಾಗಿದ್ದಾನೆ ಎಂಬುದು. ನಿಮಗೆ ಗೊತ್ತೇ ನೀವೂ ಕೂಡಾ ಬಲಶಾಲಿಯಾಗಿ ದೃಢವಾಗಿ ಇರಬೇಕೇಂಬುದೆ
ಸರ್ವ ಶಕ್ತನಾದ ತಂದೆಯ ಬಯಕೆಕೂಡಾ.
ನೀವು ಯುದ್ಧವೀರನ ಅಂಬುಗಳಲ್ಲಿರುವ ಬಾಣಗಳಂತೆ ಕೀರ್ತನೆ 127:4, 5 ದೇವರ ಮಕ್ಕಳೆ ನಿಮ್ಮ ದೌರ್ಬಲ್ಯಗಳನ್ನು ಎದುರಿಸಿ ನಿಲ್ಲಿ,
ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.
ಫಿಲಿಪ್ಪಿಯವರಿಗೆ 4:13
ಈ ವಾಕ್ಯವನ್ನು ನಿಮ್ಮ ಬಾಯಿಯಿಂದ ಪದೇಪದೇ ಹೇಳುತ್ತಿರಿ. ಆಗ ನಿಮ್ಮ ಆತ್ಮಕ್ಕು ದೇಹಕ್ಕು ಬಲಗೊಳ್ಳುತ್ತದೆ.
ಈ ಜಗತ್ತಿನ ಜನರು ತಮ್ಮ ದೇಹವನ್ನು ಬಲಪಡಿಸಿಕೊಳ್ಳಲು ನೂರಾರು ಹಾದಿಗಳ್ಳನ್ನು ಹಿಡಿಯುತ್ತಾರೆ, ಆದರೆ ತಮ್ಮ ಆತ್ಮವನ್ನು ಬಲಪಡಿಸಿಕೋಳ್ಳುವ ದಾರಿಯನ್ನು ಗೊತ್ತೇ ಇಲ್ಲಾ. ನೀವು ಬಲವಾಗಿ ಬಲಶಾಲಿಯಾಗಿದ್ದರೆ ಮಾತ್ರ ನೀವು ಕರ್ತನಿಗಾಗಿ ದೊಡ್ಡ ಕಾರ್ಯಗಳನ್ನು ಮಾಡಬಹುದು.
ನನಗೆ ಏಕೆ ಈ ಬಲಹೀನತೆ, ನಾನು ಏಕೆ ಹೀಗೆ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ನೀವು ಯೋಚಿಸುತ್ತೀರಬಹುದು. ಮೊದಲು ನೀವೂ ಎಲ್ಲಾ ಭಾರಗಳನ್ನು, ದೌರ್ಬಲ್ಯವನ್ನು ಮತ್ತು ರೋಗಗಳನ್ನು ಕರ್ತನ ಮೇಲೆ ಹಾಕಿ
ಮತ್ತಾಯ 8:17 ವಚನದಲ್ಲಿ "ಇದರಿಂದ ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು ಎಂದು ಕಾಣಬಹುದು.
ಯೆಶಾಯ 53:5 ರಲ್ಲಿ "ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು." ಎಂಬುದನ್ನ ಕಾಣಬಹುದು.
ದೇವರ ಮಕ್ಕಳೇ ನಿಮ್ಮ ಎಲ್ಲಾ ಭಾರಗಳನ್ನು ದೇವರ ಮೇಲೆ ಹಾಕಿ, ಆತನು ನಿಮ್ಮನ್ನು ಬಲಪಡಿಸುವ ಕ್ರಿಸ್ತನ ಕಡೆಗೆ ನೋಡಿ. ಮತ್ತು ನಿಮ್ಮ ಪೂರ್ಣ ಹೃದಯದಿಂದ ಪೂರ್ಣ ಶಕ್ತಿಯಿಂದ ಆತನನ್ನು ಸ್ತುತಿಸಿರಿ, ಆಗ ಕರ್ತನು ನಿಮ್ಮನ್ನು ಬಲಪಡಿಸುವನು.
ನೆನಪಿನಲ್ಲಿಟ್ಟುಕೊಳ್ಳಿ ಏಕೆಂದರೆ
ನೀವು ದೇವರ ಆತ್ಮನ ಮೂಲಕ ಆತ್ಮದಲ್ಲಿ ವಿಶೇಷ ಬಲಹೊಂದ ಬೇಕೆಂಬುದಾಗಿ ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ. ಆಮೇನ್